e-varadi ಲೊಗೊ
Home
ಮುಖಪುಟ
ಪಾಲಿಟಿಕ್ಸ್
ಬಿಸಿನೆಸ್
ಸಿನಿಮಾ
ಅಪರಾಧ
ಅಂಕಣ/ಸಂದರ್ಶನ
e-varadi ಲೊಗೊ
Home
ಮುಖಪುಟ
ಪಾಲಿಟಿಕ್ಸ್
ಬಿಸಿನೆಸ್
ಸಿನಿಮಾ
ಅಪರಾಧ
ಅಂಕಣ/ಸಂದರ್ಶನ
More
  • Home
  • ಮುಖಪುಟ
  • ಪಾಲಿಟಿಕ್ಸ್
  • ಬಿಸಿನೆಸ್
  • ಸಿನಿಮಾ
  • ಅಪರಾಧ
  • ಅಂಕಣ/ಸಂದರ್ಶನ

  • Home
  • ಮುಖಪುಟ
  • ಪಾಲಿಟಿಕ್ಸ್
  • ಬಿಸಿನೆಸ್
  • ಸಿನಿಮಾ
  • ಅಪರಾಧ
  • ಅಂಕಣ/ಸಂದರ್ಶನ

ಈ-ವರದಿ ವೆಬ್‌ಸೈಟ್‌ಗೆ ಸ್ವಾಗತ * ಪ್ಲೀಸ್ ಸದಸ್ಯತ್ವ ಪಡೆದುಕೊಳ್ಳಿ * ಜಾಹಿರಾತು ನೀಡಲು ಸಂಪರ್ಕಿಸಿ: 8150828888

ಈ-ವರದಿ ವೆಬ್‌ಸೈಟ್‌ಗೆ ಸ್ವಾಗತ * ಪ್ಲೀಸ್ ಸದಸ್ಯತ್ವ ಪಡೆದುಕೊಳ್ಳಿ * ಜಾಹಿರಾತು ನೀಡಲು ಸಂಪರ್ಕಿಸಿ: 8150828888

ಈ-ವರದಿ ವೆಬ್‌ಸೈಟ್‌ಗೆ ಸ್ವಾಗತ * ಪ್ಲೀಸ್ ಸದಸ್ಯತ್ವ ಪಡೆದುಕೊಳ್ಳಿ * ಜಾಹಿರಾತು ನೀಡಲು ಸಂಪರ್ಕಿಸಿ: 8150828888

ಈ-ವರದಿ ವೆಬ್‌ಸೈಟ್‌ಗೆ ಸ್ವಾಗತ * ಪ್ಲೀಸ್ ಸದಸ್ಯತ್ವ ಪಡೆದುಕೊಳ್ಳಿ * ಜಾಹಿರಾತು ನೀಡಲು ಸಂಪರ್ಕಿಸಿ: 8150828888

ಈ-ವರದಿ ವೆಬ್‌ಸೈಟ್‌ಗೆ ಸ್ವಾಗತ * ಪ್ಲೀಸ್ ಸದಸ್ಯತ್ವ ಪಡೆದುಕೊಳ್ಳಿ * ಜಾಹಿರಾತು ನೀಡಲು ಸಂಪರ್ಕಿಸಿ: 8150828888

ಈ-ವರದಿ ವೆಬ್‌ಸೈಟ್‌ಗೆ ಸ್ವಾಗತ * ಪ್ಲೀಸ್ ಸದಸ್ಯತ್ವ ಪಡೆದುಕೊಳ್ಳಿ * ಜಾಹಿರಾತು ನೀಡಲು ಸಂಪರ್ಕಿಸಿ: 8150828888

CCB ಆಂಟಿ ನಾರ್ಕೋಟಿಕ್ಸ್ ವಿಂಗ್: ವಿದೇಶಿ ಪ್ರಜೆ ಬಂಧನ

ವಶಪಡಿಸಿಕೊಂಡ ವಸ್ತುಗಳ ಮೌಲ್ಯ ₹1.5 ಕೋಟಿ

 ಮಾದಕವಸ್ತುಗಳ ಅಕ್ರಮ ಪೂರೈಕೆಯಲ್ಲಿ ತೊಡಗಿರುವ ವಿದೇಶಿ ಪ್ರಜೆಯನ್ನು ಕೇಂದ್ರ ಅಪರಾಧ ವಿಭಾಗದ (CCB) ಆಂಟಿ-ನಾರ್ಕೋಟಿಕ್ಸ್ ವಿಂಗ್ ಬಂಧಿಸಿದೆ.  1 ಕೆಜಿ 3 ಗ್ರಾಂ ಎಂಡಿಎಂಎ ಹರಳುಗಳು, ಪೋರ್ಟಬಲ್ ಎಲೆಕ್ಟ್ರಾನಿಕ್ ತೂಕದ ಯಂತ್ರ, ಮೊಬೈಲ್ ಫೋನ್ ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ₹1.5 ಕೋಟಿ. 

ಎಟಿಎಂ ನಗದು ವ್ಯಾನ್ ತಡೆದು 7 ಕೋಟಿ ರೂಪಾಯಿಗಳೊಂದಿಗೆ ಪರಾರಿ

 ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸಿ  ಅಶೋಕ ಪಿಲ್ಲರ್ ಬಳಿ ಎಟಿಎಂ ನಗದು ವ್ಯಾನ್ ತಡೆದ ದುಷ್ಕರ್ಮಿಗಳು ಸುಮಾರು 7 ಕೋಟಿ ರೂಪಾಯಿಗಳೊಂದಿಗೆ ಪರಾರಿಯಾಗಿದ್ದಾರೆ.

ಭಾರತ ಸರ್ಕಾರದ ಸ್ಟಿಕ್ಕರ್ ಕಾರಿನ ಗುಂಪೊಂದು ದಾಖಲೆಗಳನ್ನು ಪರಿಶೀಲಿಸುವುದಾಗಿ ನಗದು ವಾಹನವನ್ನು ತಡೆದಿದೆ. ನಂತರ ಶಂಕಿತರು ವ್ಯಾನ್‌ನ ಸಿಬ್ಬಂದಿಯನ್ನು ನಗದು ಜೊತೆಗೆ ತಮ್ಮ ಕಾರಿನೊಳಗೆ ಬಲವಂತವಾಗಿ ಕೂರಿಸಿಕೊಂಡರು. ನಂತರ ಡೈರಿ ಸರ್ಕಲ್ ಬಳಿ ಸಿಬ್ಬಂದಿಯನ್ನು ಇಳಿಸಿ ಸುಮಾರು ಏಳು ಕೋಟಿ ರೂ.ಗಳಷ್ಟು ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವ ಡಾ. ಜಿ ಪರಮೇಶರ್ ಅವರು,  ಆರೋಪಿಗಳನ್ನು ಬಂಧಿಸುವಂತೆ ಡಿಜಿ-ಐಜಿಪಿ ಸಲೀಂ ಅವರಿಗೆಸೂಚಿಸಿದ್ದಾರೆ. 

ಸೇನಾ ನೇಮಕಾತಿ ಪರೀಕ್ಷೆ: ವಂಚನೆ ಆರೋಪದ 18 ಅಭ್ಯರ್ಥಿಗಳ ಬಂಧನ

 ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ  ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿ 8 ರಂದು ನಡೆದ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ನಕಲು ಮಾಡಿದ ಆರೋಪದ ಮೇಲೆ 18 ಪರೀಕ್ಷಾರ್ಥಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

75 ಪ್ರಕರಣಗಳನ್ನು ಭೇದಿಸಿದ ಉತ್ತರ ವಿಭಾಗದ ಪೊಲೀಸರು

ಬೆಂಗಳೂರು,ಫೆ.13- ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳ್ಳತನ, ವಾಹನ ಕಳವು ಸೇರಿದಂತೆ 75 ಪ್ರಕರಣಗಳನ್ನು ಭೇದಿಸಿ 83 ಆರೋಪಿಗಳನ್ನು ಬಂಧಿಸಿ 1.76 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣ, ಬೆಳ್ಳಿ ವಸ್ತುಗಳು ಹಾಗೂ 67 ಮೊಬೈಲ್‌ಗಳು, 3 ಲಕ್ಷ ನಗದು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.


ಮಲ್ಲೇಶ್ವರ ಪೊಲೀಸ್‍ ಠಾಣೆ ಎದುರಿನ ಜಿಬಿಎ ಆಟದ ಮೈದಾನದಲ್ಲಿ ಇಂದು ಹಮಿಕೊಂಡಿದ್ದ ಸ್ವತ್ತುಗಳ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಮಾಲುಗಳ ಕೆಲವು ವಾರಸುದಾರರಿಗೆ ನಗರ ಪೊಲೀಸ್‍ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರು ಅವುಗಳನ್ನು ಹಸ್ತಾಂತರಿಸಿದರು.

ಮಲ್ಲೇಶ್ವರ ಠಾಣೆ ಪೊಲೀಸರು 3 ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ 20.12 ಲಕ್ಷ ರೂ. ಮೌಲ್ಯದ 193.39 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.


ರಾಜಾಜಿನಗರ ಠಾಣೆ ಪೊಲೀಸರು 14 ಪ್ರಕರಣಗಳಲ್ಲಿ12 ಮಂದಿ ಆರೋಪಿಗಳನ್ನು ಬಂಧಿಸಿ 50.12 ಲಕ್ಷ ರೂ. ಮೌಲ್ಯದ 392.39 ಗ್ರಾಂ ಚಿನ್ನಾಭರಣ, 9 ದ್ವಿಚಕ್ರ ವಾಹನಗಳು, 1 ನಾಲ್ಕು ಚಕ್ರದ ವಾಹನ, 4 ಮೊಬೈಲ್‌ಗಳು ಹಾಗೂ 1ವಾಟರ್ ಮೋಟಾರ್ ವಶಪಡಿಸಿಕೊಂಡಿದ್ದಾರೆ.

ಸುಬ್ರಹಣ್ಯನಗರ ಠಾಣೆ ಪೊಲೀಸರು 1 ಪ್ರಕರಣದಲ್ಲಿ ಒಬ್ಬಾತನನ್ನು ಬಂಧಿಸಿ 20 ಸಾವಿರ ಬೆಲೆಯ ದ್ವಿಚಕ್ರ ವಾಹನ ವಶಪಡಿಸಿಕೊಂಡರೇ, ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು 9 ಪ್ರಕರಣಗಳಲ್ಲಿ 5 ಮಂದಿಯನ್ನು ಬಂಧಿಸಿ 1.5 ಲಕ್ಷ ನಗದು, 17 ಗ್ರಾಂ ಚಿನ್ನಾಭರಣ, 10 ದ್ವಿಚಕ್ರ ವಾಹನಗಳು ಹಾಗೂ 1 ಮೊಬೈಲ್‌ನನ್ನು ವಶಪಡಿಸಿಕೊಂಡಿದ್ದಾರೆ.


ನಂದಿನಿ ಲೇಔಟ್ ಠಾಣೆ ಪೊಲೀಸರು 1 ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಿ 14.50 ಲಕ್ಷ ರೂ. ಬೆಲೆಯ 100 ಗ್ರಾಂ ಚಿನ್ನಾಭರಣ ಹಾಗೂ 800 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಯಶವಂತಪುರ ಠಾಣೆ ಪೊಲೀಸರು 4 ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ 5.59 ಲಕ್ಷ ರೂ. ಮೌಲ್ಯದ 24 ಗ್ರಾಂ ಚಿನ್ನಾಭರಣ, 130 ಗ್ರಾಂ ಬೆಳ್ಳಿ ವಸ್ತುಗಳು, 4.58 ಗ್ರಾಂ ವಜ್ರದ ಆಭರಣ ಹಾಗೂ 2 ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.ಆರ್‌ಎಂಸಿಯಾರ್ಡ್ ಠಾಣೆ ಪೊಲೀಸರು 8 ಪ್ರಕರಣಗಳಲ್ಲಿ 14 ಮಂದಿಯನ್ನು ಬಂಧಿಸಿ 26.63 ಲಕ್ಷ ರೂ. ಬೆಲೆಯ 50 ಗ್ರಾಂ ಚಿನ್ನಾಭರಣ, 8 ದ್ವಿಚಕ್ರ ವಾಹನ, 51 ಮೊಬೈಲ್‌ಗಳು ಹಾಗೂ ಒಂದು ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದಾರೆ.


ಜಾಲಹಳ್ಳಿ ಠಾಣೆ ಪೊಲೀಸರು 2 ಪ್ರಕರಣಗಳಲ್ಲಿ ಒಬ್ಬಾತನನ್ನು ಬಂಧಿಸಿ 40 ಲಕ್ಷ ಮೌಲ್ಯದ 419 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡರೆ, ಜೆಸಿನಗರ ಠಾಣೆ ಪೊಲೀಸರು 4 ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ 16.50 ಲಕ್ಷ ರೂ. ಮೌಲ್ಯದ 134ಗ್ರಾಂ ಚಿನ್ನಾಭರಣ, 400 ಗ್ರಾಂ ಬೆಳ್ಳಿವಸ್ತುಗಳು, 6 ದ್ವಿಚಕ್ರ ವಾಹನಗಳು ಹಾಗೂ 1.5 ಲಕ್ಷ ಹಣ ಜಪ್ತಿ ಮಾಡಿದ್ದಾರೆ.


ಆರ್‌ಟಿನಗರ ಠಾಣೆ ಪೊಲೀಸರು 8 ಪ್ರಕರಣಗಳಲ್ಲಿ 6 ಮಂದಿಯನ್ನು ಬಂಧಿಸಿ 10.46 ಲಕ್ಷ ರೂ. ಮೌಲ್ಯದ 92.6 ಗ್ರಾಂ ಚಿನ್ನಾಭರಣ, 4 ದ್ವಿಚಕ್ರ ವಾಹನಗಳು ಹಾಗೂ ಸಂಜಯನಗರ ಠಾಣೆ ಪೊಲೀಸರು 8 ಪ್ರಕರಣಗಳಲ್ಲಿ 5 ಮಂದಿಯನ್ನು ಬಂಧಿಸಿ 25.56 ಲಕ್ಷ ರೂ. ಮೌಲ್ಯದ 230 ಗ್ರಾಂ ಚಿನ್ನಾಭರಣ, 6 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.


ಹೆಬ್ಬಾಳ ಠಾಣೆ ಪೊಲೀಸರು 18 ಪ್ರಕರಣಗಳಲ್ಲಿ 18 ಮಂದಿಯನ್ನು ಬಂಧಿಸಿ 17.56 ಲಕ್ಷ ರೂ. ಮೌಲ್ಯದ 87.66 ಗ್ರಾಂ ಚಿನ್ನಾಭರಣ, 59 ಗ್ರಾಂ ಬೆಳ್ಳಿ ವಸ್ತುಗಳು, 9 ದ್ವಿಚಕ್ರ ವಾಹನಗಳು, 2ತ್ರಿಚಕ್ರ ವಾಹನಗಳು ಮತ್ತು 5 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಉತ್ತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

Copyright © 2026 media - All Rights Reserved.


Powered by

This website uses cookies.

We use cookies to analyze website traffic and optimize your website experience. By accepting our use of cookies, your data will be aggregated with all other user data.

Accept