ಟೈಟಲ್ ಧ್ವನಿಸುವಂತೆ ಸಿನಿಮಾದ ವಸ್ತು ವರ್ಗ ಸಂಘರ್ಷ. ಇದರಲ್ಲಿ ಸಂವಿಧಾನದ ಮಹತ್ವ, ತಳಸಮುದಾಯದ ವಸ್ತು ಮತ್ತು ಪಾತ್ರಗಳು ಹೀರೋಯಿಸಂ ಸ್ವರೂಪದಲ್ಲಿ ನಿರೂಪಿಸಲ್ಪಟ್ಟಿದೆ. ಇಂಡಿಯನ್ ಸಿನಿಮಾ ಮಟ್ಟಿಗೆ ಇದು ಮಹತ್ವದ ಬೆಳವಣಿಗೆ. ನಮ್ಮ ಜನಪ್ರಿಯ ನಾಯಕ ನಟ ವಿಜಯ ಕುಮಾರ್ (ದುನಿಯಾ ವಿಜಿ) ‘ಲ್ಯಾಂಡ್‌ಲಾರ್ಡ್’ ಸಿನಿಮಾ ಮೂಲಕ ಸಂವಿಧಾನದ ಮಹತ್ವ ಸಾರುವ ಸಾಹಸ ಮಾಡಿದ್ದಾರೆ.
ಇಂಡಿಯಾದ ಕಮರ್ಷಿಯಲ್ ಸಿನಿಮಾಗಳಲ್ಲಿ ಹಿಂಸೆ ಮತ್ತು ಭ್ರಮಾತ್ಮಕ ಜಗತ್ತಿನ ವಿಜೃಂಭಣೆ ಸಾಮಾನ್ಯ. ಶೋಷಿತ ಜನರ ದಾರುಣ ಬದುಕನ್ನು ಹಾಗೂ ಅದಕ್ಕೆ ಸೃಷ್ಟಿಯಾಗುವ ಹಿಂಸೆಯನ್ನು ಇಂದಿನ ಸಿನಿಮಾಗಳು ವಿಜೃಂಭಿಸಿದ್ದೇ ಹೆಚ್ಚು. ಇದಕ್ಕೆ ಹೊರತಾಗಿರುವ ‘ಲ್ಯಾಂಡ್‌ಲಾರ್ಡ್’ ಸಿನಿಮಾದಲ್ಲಿ ಶೋಷಿತ ವರ್ಗ ಹಾಗೂ ಸಮುದಾಯಗಳ ಹಕ್ಕಿನ ಬಗ್ಗೆ ಸ್ಪಷ್ಟತೆ ಇದೆೆ.

We use cookies to analyze website traffic and optimize your website experience. By accepting our use of cookies, your data will be aggregated with all other user data.